ಭೂರಸಾಯನ ವಿಜ್ಞಾನ

	ಭೂಮಿಯ ವಿವಿಧ ಪ್ರಾವಸ್ಥೆಗಳ ರಾಸಾಯನಿಕ ಸಂಯೋಜನೆ, ಈ ಪ್ರಾವಸ್ಥೆಗಳಲ್ಲಿಯ ಧಾತು ಮತ್ತು ನ್ಯೂಕ್ಲೈಡುಗಳ ವೀಕ್ಷಿತ ವಿತರಣೆಯನ್ನು ಉಂಟುಮಾಡಿದ ಭೌತ ಹಾಗೂ ರಾಸಾಯನಿಕ ಪ್ರಕ್ರಿಯೆಗಳನ್ನು ಕುರಿತ ಶಾಸ್ತ್ರೀಯ ಅಧ್ಯಯನ (ಜಿಯೊಕೆಮಿಸ್ಟ್ರಿ). ರಾಸಾಯನಿಕ ಧಾತುಗಳು ಭೂಮಿಯಲ್ಲಿ ವ್ಯಾಪಿಸಿರುವುದರ ಬಗೆಗೂ ಭೂಮಿಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಅವು ವರ್ಗಾವಣೆ ಹೊಂದುತ್ತಿರುವುದರ ಬಗೆಗೂ ವಿವರಗಳನ್ನು ಈ ವಿe್ಞÁನಯುಗದಿಂದ ತಿಳಿಯಬಹುದು.

	ಓಜೋನ್ ಅನಿಲವನ್ನು ಆವಿಷ್ಕರಿಸಿದ (1838) ಸ್ವಿಟ್ಸರ್ಲೆಂಡಿನ ರಸಾಯನವಿe್ಞÁನಿ ಕ್ರಿಶ್ಚಿಯನ್ ಷ್ನಾಬೆನ್ ಭೂರಸಾಯನವಿe್ಞÁನ ಎಂಬ ಪದವನ್ನು ಮೊದಲಿಗೆ ಪ್ರಯೋಗಿಸಿದ. ಭೂಮಿಯಲ್ಲಿನ ವಿವಿಧ ಧಾತುಗಳ ನಿಷ್ಪತ್ತಿಯನ್ನು ಸುಮಾರು ನೂರು ವರ್ಷಗಳ ಹಿಂದೆ ಡೋಬರ್ನೀರ್ ಎಂಬವ ನಿರ್ಧರಿಸಿದ್ದ. ಈತ ನಿರ್ಧರಿಸಿದ ಅಂಕೆ ಅಂಶಗಳು ಅಷ್ಟು ನಿಖರವಾಗಿರಲಿಲ್ಲವಾದರೂ ಇವನ ಪ್ರಯೋಗ ಭೂರಸಾಯನ ವಿe್ಞÁನದ ಬೆಳೆವಣಿಗೆಯಲ್ಲಿಯ ಒಂದು ಮೈಲಿಗಲ್ಲು ಎಂದು ಹೇಳಬಹುದು. 1850ರ ವೇಳೆಗೆ ಸ್ವೀಡನ್ನಿನ ರಸಾಯನವಿe್ಞÁನಿ ಬರ್ಝೀಲಿಯಸ್ ಮತ್ತು ಅವನ ಶಿಷ್ಯರು ಅನೇಕ ಶಿಲೆಗಳ ಮತ್ತು ಖನಿಜಗಳ ರಾಸಾಯನಿಕ ಸಂಯೋಜನೆ ನಿರ್ಧರಿಸಿ ಪಟ್ಟಿಮಾಡಿದರು. ಇದನ್ನು ಬಳಸಿಕೊಂಡು ಜರ್ಮನಿಯ ಭೂವಿe್ಞÁನಿ ಬಿಷಾಫ್ ಎಂಬಾತ ಭೂಮಿಯ ರಾಸಾಯನಿಕ ಸಂಯೋಜನೆ ಕುರಿತ ಗ್ರಂಥ ಪ್ರಕಟಿಸಿದ. ಇದು ಬಹಳ ವರ್ಷಗಳ ತನಕ ಅನೇಕ ಸಂಶೋಧಕರಿಗೆ ಆಧಾರಗ್ರಂಥವಾಗಿತ್ತು. ರಾತ್ ಎಂಬ ವಿe್ಞÁನಿಯ ಮತ್ತೊಂದು ಗ್ರಂಥವೂ (1893) ಈ ತೆರನಾದುದೇ.

	ಹತ್ತೊಂಬತ್ತನೆಯ ಶತಮಾನದುದ್ದಕ್ಕೂ ಭೂರಸಾಯನ ವಿe್ಞÁನಕ್ಕೆ ಅಷ್ಟಾಗಿ ಪ್ರಾಮುಖ್ಯ ದೊರೆಯದೆ ಅದು ಕೇವಲ ಭೂವಿe್ಞÁನ ಮತ್ತು ಖನಿಜವಿe್ಞÁನಗಳ ಭಾಗವಾಗಿಯೇ ಉಳಿಯುವಂತಾಯಿತು. ಹೀಗಿದ್ದರೂ ಆಕಾಲದಲ್ಲಿ ಭೂಮಿಯ ವಿವಿಧ ಖನಿಜಗಳು, ಶಿಲೆಗಳು ನೀರು ಮತ್ತು ಅನಿಲಗಳ ರಾಸಾಯನಿಕ ಸಂಯೋಜನೆಗಳು ನಿರ್ಧಾರಗೊಂಡುವು. ಇಂಥ ಸಂಶೋಧನೆಗಳು ಬಲುಮಟ್ಟಿಗೆ ಯೂರೋಪಿನ ವಿವಿಧ ಸಂಶೋಧನಾಲಯಗಳಲ್ಲೇ ನಡೆದುವು. ಅಮೆರಿಕ ಸಂಯುಕ್ತ ಸಂಸ್ಥಾನಗಳ ಭೂಶೋಧನ ಇಲಾಖೆಯಲ್ಲಿ ಕ್ಲಾರ್ಕ್ ಎಂಬ ರಸಾಯನ ವಿe್ಞÁನಿ ಈ ಬಗೆಯ ಸಂಶೋಧನೆ ನಡೆಸಿ (1884) ಭೂರಸಾಯನವಿe್ಞÁನದ ಬೆಳೆವಣಿಗೆಗೆ ಬಲು ಮಟ್ಟಿಗೆ ಕಾರಣನಾದ. ಈತ ಕೆಲಸ ನಿರ್ವಹಿಸುತ್ತಿದ್ದ ಸಂಶೋಧನಾಲಯ ಆಗಿನ ಕಾಲಕ್ಕೆ ಪ್ರಪಂಚದಲ್ಲೇ ಅತ್ಯಂತ ದೊಡ್ಡದು ಎನಿಸಿತ್ತು. ಇವನು ಸುಮಾರು 40 ವರ್ಷಗಳಿಗೂ ಹೆಚ್ಚು ಕಾಲ ಈ ಸಂಶೋಧನಾಲಯದ ಮುಖ್ಯಾಧಿಕಾರಿಯಾಗಿದ್ದ. ಈತ ರಚಿಸಿದ ದಿ ಡ್ಯಾಟ ಆಫ್ ಜಿಯೊಕೆಮಿಸ್ಟ್ರಿ ಎಂಬ ಉದ್ಗ್ರಂಥ ಭೂರಸಾಯನವಿe್ಞÁನದ ವೇದ ಎಂದು ಪರಿಗಣಿತವಾಗಿದೆ. ಭೂಮಿಯಲ್ಲಿಯ ಪ್ರತಿಯೊಂದು ಶಿಲೆಯೂ ಅಲ್ಲಿ ನಡೆದ ರಾಸಾಯನಿಕ ಬದಲಾವಣೆಗಳ ಪ್ರತೀಕ ಎಂಬ ಅಭಿಪ್ರಾಯವನ್ನು ಈತ ತಾಳಿದ್ದ. ಅನೇಕ ವೇಳೆ ಇವುಗಳಲ್ಲಿ ತೋರುವ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ಸಮತೋಲಸ್ಥಿತಿ ಏರುಪೇರಾಗಿ ಹೊಸ ಬದಲಾವಣೆಗಳಿಗೆ ಕಾರಣವಾಗುತ್ತದೆ.

	ನಾರ್ವೆಯ ವಿ.ಎಮ್. ಗೋಲ್ಡ್‍ಷ್ಮಿಟ್ ಭೂವಿe್ಞÁನದ ಪ್ರಾಮುಖ್ಯವನ್ನು ವಿವೇಚಿಸುತ್ತ ಭೂಮಿಯ ಮತ್ತು ಅದರ ವಿವಿಧ ಭಾಗಗಳ ಸಂಯೋಜನೆಯ ನಿರ್ಧರಣೆ, ಭೂಮಿಯಲ್ಲಿಯ ವಿವಿಧ ಧಾತುಗಳ ಹಂಚಿಕೆ ಹಾಗೂ ಅವುಗಳ ಪಾರಸ್ಪರಿಕ ನಿಷ್ಪತ್ತಿ ನಿರ್ಧರಣೆ ಮತ್ತು ಇವುಗಳಿಗೆ ಸಂಬಂಧಿಸಿದ ಮೂಲಭೂತ ತತ್ತ್ವಗಳನ್ನು ಶೋಧಿಸುವುದೇ ಭೂರಸಾಯನವಿe್ಞÁನದ ಗುರಿ ಎಂದಿದ್ದಾನೆ. ಭೂಮಿಯ ಹೊರವಲಯದ ಶಿಲೆಗಳು, ವಿವಿಧ ಬಗೆಯ ಜಲ, ವಾಯುಮಂಡಲ, ಉಲ್ಕೆಗಳು ಇವುಗಳ ಅಧ್ಯಯನ ಮತ್ತು ಭೂತಿರುಳಿನ ಅಧ್ಯಯನಕ್ಕೆ ಸಂಬಂಧಿಸಿದ ಭೂಭೌತವಿe್ಞÁನದ ಅಂಕೆ ಅಂಶಗಳು ಮೊದಲಾದವೆಲ್ಲ ಭೂರಸಾಯನವಿe್ಞÁನದ ವ್ಯಾಪ್ತಿಯಲ್ಲಿ ಬರುತ್ತವೆ. ಇವಲ್ಲದೆ ಕೃತಕ ಖನಿಜಗಳನ್ನು ಕುರಿತ ಪ್ರಯೋಗಗಳಿಂದ ದೊರೆವ ವಿe್ಞÁನವೂ ಬಲು ಉಪಯುಕ್ತವೆನಿಸಿದೆ.

	ಖನಿಜ ಸಂಶೋಧನೆಯಲ್ಲಿ ಎಕ್ಸ್‍ಕಿರಣಗಳ ಬಳಕೆ (1912) ಭೂರಸಾಯನ ವಿe್ಞÁನದ ಬೆಳೆವಣಿಗೆ ಬಹಳಷ್ಟು ಪೂರಕವಾಗಿದೆ. ಎಕ್ಸ್‍ಕಿರಣಗಳ ಬಳಕೆಯಿಂದ ವಿವಿಧ ಖನಿಜಗಳ ಅಣುರಚನಾ ವಿನ್ಯಾಸ 

ಸುಲಭಗ್ರಾಹ್ಯವಾಗಿದೆಯಲ್ಲದೆ ವಿವಿಧ ಧಾತುಗಳು ಯಾವ ರೀತಿ ಪರಸ್ಪರ ಸಂಯೋಜನೆಗೊಂಡು ವಿವಿಧ ಖನಿಜಗಳ ಬೆಳೆವಣಿಗೆಗೆ ಕಾರಣವಾಗಿವೆ ಎಂಬುದೂ ತಿಳಿದುಬಂದಿದೆ.											
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ